ಮಂಗಳೂರು, ಜ. ೨೨: ರವಿವಾರ ನಡೆಯುವ ಹಿಂದೂ ಯುವ ಸಮಾವೇಶಕ್ಕೆ ವ್ಯಾಪಕ ಪೊಲೀ ಸ್ ಬಂದೋಬಸ್ತು ವ್ಯವಸ್ಥೆ ಮಾಡಲಾಗಿದ್ದು, ಈಗಾಗಲೇ ಆಯ್ದ ಕಡೆಗಳಲ್ಲಿ ಪೊಲೀಸ್ ಸಿಬಂದಿಗ ಳನ್ನು ನಿಯೋಜಿಸಲಾಗಿದೆ.
ಜಿಲ್ಲೆಯ ಪೊಲೀಸರ ಹೊರತಾಗಿ ನೆರೆಯ ಜಿಲ್ಲೆಗಳಿಂದ 511 ಮಂದಿ ಪೊಲೀಸ್ ಸಿಬಂದಿಗಳನ್ನು ಮಂಗಳೂರು ನಗರದಲ್ಲಿ ಭದ್ರತಾ ವ್ಯವಸ್ಥೆಗಾಗಿ ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಕಚೇರಿಯ ಮೂಲಗಳು ತಿಳಿಸಿವೆ.
ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಕೊಡಗು, ಹಾಸನ, ಮಂಡ್ಯ, ಮೈಸೂರು, ಚಾಮ ರಾಜನಗರ, ರಾಮನಗರ, ಕೋಲಾರ ಜಿಲ್ಲೆಗಳ ಪೊಲೀಸ್ ಸಿಬಂದಿಗಳನ್ನು ಭದ್ರತಾ ವ್ಯವಸ್ಥೆಗಾಗಿ ಮಂಗಳೂರಿಗೆ ಕಳುಹಿಸಿಕೊಡುವಂತೆ ಕೋರಲಾಗಿದೆ.
ಈಗಾಗಲೇ ಕೆಲವು ಜಿಲ್ಲೆಗಳ ಪೊಲೀಸರು ಆಗಮಿಸಿದ್ದು, ಬಂದೋಬಸ್ತು ವ್ಯವಸ್ಥೆಯಲ್ಲಿ ಅವರನ್ನು ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ| ಎ. ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.
ಮೈದಾನ ಪರಿಶೀಲನೆ
ಹಿಂದೂ ಯುವ ಸಮಾವೇಶ ನಡೆಯುವ ಮಂಗಳೂರಿನ ನೆಹರೂ ಮೈದಾನ ಹಾಗೂ ಪರಿಸರದ ಪರಿಶೀಲನೆಯನ್ನು ಪೊಲೀಸ್ ಅಧಿಕಾರಿಗಳು ನಡೆಸಿದ್ದಾರೆ. ಇಲ್ಲಿನ ಬಿಗುಬಂದೋಬಸ್ತ್ ಕುರಿತಂ ತೆ ಉನ್ನತ ಅಧಿಕಾರಿಗಳು ಸಭೆ ನಡೆಸಿ ಪರಾಮರ್ಶೆ ನಡೆಸಿದ್ದಾರೆ.
ಬಜರಂಗದಳದ ಬೆಳ್ಳಿಹಬ್ಬ ಆಚರಣೆಯ ನಿಮಿತ್ತ ಹಿಂದೂ ಯುವ ಸಮಾವೇಶ ಆಯೋಜಿಸಲಾಗಿ ದೆ. ಪ್ರಮುಖ ಭಾಷಣಕಾರರಾಗಿ ಬಿಜೆಪಿ ಯುವ ನಾಯಕ ವರುಣ್ ಗಾಂಧಿ ಅವರು ಭಾಗವಹಿಸಲಿ ದ್ದಾರೆ